ಬೆಂಗಳೂರು, ಫೆ 27 (DaijiwsorldNews/HR): ಬಿ.ಎಸ್. ಯಡಿಯೂರಪ್ಪಅವರನ್ನು ಚುನಾವಣೆಯಲ್ಲಿ ಲಿಂಗಾಯತ ಮತಗಳಿಗಾಗಿ ಈಗ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕಾಮಧೇನು ರೀತಿಯಲ್ಲಿ ಎಲ್ಲಾ ರೀತಿಯಾಗಿ ಹಿಂಡಿ ಮನೆಗೆ ಕಳುಹಿಸುತ್ತಾರೆ ಎಂದು ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎಲ್.ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಅರುಣ ಶೌರಿ ಅವರಿಗೆ ವಯಸ್ಸು ಆಗಿದೆ ಎಂದು ಮಾರ್ಗದರ್ಶಕ ಮಂಡಳಿಗೆ ಕಳಿಸಿದ್ದಾರೆ. ಆದರೆ ಯಡಿಯೂರಪ್ಪ ಅವರು ಲಿಂಗಾಯತರ ಮಹಾನಾಯಕ ಎಂಬ ಕಾರಣಕ್ಕಾಗಿ ಸ್ವಲ್ಪ ಮಟ್ಟಿಗೆ ಜತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದರು.
ಇನ್ನು ಇಟ್ಟುಕೊಳ್ಳಬೇಕೋ ಬೇಡವೋ ಎಂಬ ಅಡಕತ್ತರಿಯಲ್ಲಿ ಬಿಜೆಪಿ ಬಿದ್ದಿದ್ದು, ಕೆಲವೇ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಕೂಡಾ ಮಾರ್ಗದರ್ಶಕ ಮಂಡಳಿಗೆ ಕಳುಹಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.