ನವದೆಹಲಿ, ಫೆ 27 (DaijiwsorldNews/HR): ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯ(ಸಿಬಿಐ) ಹಲವು ಅಧಿಕಾರಿಗಳು ಬಂಧಿಸಿರುವ ಕ್ರಮಕ್ಕೆ ವಿರುದ್ಧವಾಗಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಹೆಚ್ಚಿನ ಸಿಬಿಐ ಅಧಿಕಾರಿಗಳು ಮನೀಶ್ ಬಂಧನವನ್ನು ವಿರೋಧಿಸಿದ್ದು, ಅವರೆಲ್ಲರಿಗೂ ಸಿಸೋಡಿಯಾ ಮೇಲೆ ಅಪಾರ ಗೌರವವಿದೆ ಮತ್ತು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂಬುದು ತಿಳಿದಿದೆ ಎಂದರು
ಇನ್ನು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲು ರಾಜಕೀಯ ಒತ್ತಡ ಹೆಚ್ಚಿದ್ದು, ಅಧಿಕಾರಿಗಳು ಅದನ್ನು ಪಾಲಿಸಿದ್ದಾರೆ ಎಂದಿದ್ದಾರೆ.