ನವದೆಹಲಿ, ಫೆ 28 (DaijiworldNews/MS): ಕಾರು ಢಿಕ್ಕಿ ಹೊಡೆದು ಸೋಮವಾರ ಸಂಜೆ ಮೂರುವರೆ ವರ್ಷದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸಮರ್ಕ್ ಮಲಿಕ್ (20) ಬಂಧಿತ ಚಾಲಕ. ಈತ ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರನೆಂದು ತಿಳಿದು ಬಂದಿದೆ. ಈತ ಚಲಾಯಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ .ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರೂಪ್ ಕ್ಯಾಪ್ಟನ್ ಪುತ್ರನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 26 ರಂದು ಸಂಜೆ 5.20 ಕ್ಕೆ ಆರ್ಎಂಎಲ್ ಆಸ್ಪತ್ರೆಯಿಂದ ಮೂರೂವರೆ ವರ್ಷದ ಬಾಲಕಿ ಸಾವನ್ನಪ್ಪಿದ ಬಗ್ಗೆ ಪೊಲೀಸರು ದೂರು ಸ್ವೀಕರಿಸಿದ್ದರು.
ಭಾನುವಾರ ( ಫೆ.26 ರಂದು) ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿದ ಪರಿಣಾಮ ಕಾರು ಬಾಲಕಿಗೆ ಢಿಕ್ಕಿ ಹೊಡೆದಿದೆ. ಆರೋಪಿ ಚಾಲಕ ಸಮರ್ಕ್ ಗಾಯಗೊಂಡ ಬಾಲಕಿಯನ್ನು ಆಕೆಯ ಕುಟುಂಬದೊಂದಿಗೆ ದೆಹಲಿ ಕ್ಯಾಂಟ್ ಆಸ್ಪತ್ರೆ ಮತ್ತು ಡಿಡಿಯು ಆಸ್ಪತ್ರೆಗೆ ಕರೆದೊಯ್ದಿದ್ದು ಆದರೆ ಆದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಬಾಲಕಿಯ ತಾಯಿ ಮನೆ ಕೆಲಸ ಮಾಡಿಕೊಂಡಿದ್ದಾರೆ. ತಂದೆ ಖಾಸಗಿ ಕಂಪೆನಿಯಲ್ಲಿದ್ದಾರೆ.ಅರ್ಜುನ್ ವಿಹಾರ್ ದಲ್ಲಿ ಬಾಲಕಿಯ ಕುಟುಂಬ ವಾಸಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.