ನವದೆಹಲಿ, ಮಾ 02 (DaijiworldNews/HR): ಫೆ. 16ರಂದು ತ್ರಿಪುರಾ ಮತ್ತು ಫೆ. 27ರಂದು ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.
ಮೂರು ರಾಜ್ಯಗಳಲ್ಲಿ ಒಟ್ಟು 60 ವಿಧಾನ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮೇಘಾಲಯದಲ್ಲಿ ಆರಂಭಿಕ ಹಂತದಲ್ಲಿ 60 ಕ್ಷೇತ್ರಗಳಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು,ಕಾಂಗ್ರೆಸ್ 8 ಕ್ಷೇತ್ರದಲ್ಲಿ, ಎನ್ ಪಿಪಿ 21 ಕ್ಷೇತ್ರದಲ್ಲಿ ಹಾಗೂ ಇತರರು 11 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇನ್ನು ತ್ರಿಪುರಾದಲ್ಲಿ ಕಾಂಗ್ರೆಸ್ ಮೈತ್ರಿಕೂಟ 4, ಬಿಜೆಪಿ ಮೈತ್ರಿಕೂಟ 39, ಟಿಎಂಪಿ 5,ಇತರೆ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಒಟ್ಟು 60 ಕ್ಷೇತ್ರಗಳಿವೆ.
ನಾಗಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ಒಟ್ಟು 60 ಕ್ಷೇತ್ರದಲ್ಲಿ 34 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು,ಎನ್ ಪಿಎಫ್ ಪಕ್ಷ 4, ಕಾಂಗ್ರೆಸ್ 1 ಇತರೆ ಪಕ್ಷಗಳು 9 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.