ಬೆಂಗಳೂರು, ಮಾ 02 (DaijiworldNews/MS): ವಿಧಾನಸಭೆ ಚುನಾವಣೆಗೆ ಎಸ್ ಡಿಪಿಐ ಪಕ್ಷವು ತನ್ನ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಎಸ್ ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ. ಫೈಝಿ 2ನೇ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ 9 ಮಂದಿ ಅಭ್ಯರ್ಥಿಗಳ ಹೆಸರಿದೆ.
ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಾಫಿ ಬೆಳ್ಳಾರೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸುವುದು ಇದೀಗ ಖಚಿತಗೊಂಡಿದೆ. ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಲು ಸ್ಕೆಚ್ ಹಾಕಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಜನವರಿಯಲ್ಲಿ 10 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಈಗ 9 ಮಂದಿಯ ೨ನೇ ಪಟ್ಟಿಯಲ್ಲಿ ಶಾಫಿ ಹೆಸರು ಇದೆ.
ಇದಲ್ಲದೆ ಮಡಿಕೇರಿ- ಅಮೀನ್ ಮೊಹ್ಸಿನ್, ರಾಯಚೂರು- ಸಯೀದ್ ಇಸಾಕ್ ಹುಸೈನ್, ತೇರದಾಳ- ಯಮನಪ್ಪ ಗುಣದಾಳ್, ಮೂಡಿಗೆರೆ-ಅಂಗಡಿ ಚಂದ್ರು, ಬಿ ಜಾಪುರ ನಗರ - ಅಥಾವುಲ್ಲ ದ್ರಾಕ್ಷಿ, ಮಂಗಳೂರು(ಉಳ್ಳಾಲ)- ರಿಯಾಝ್ ಫರಂಗಿಪೇಟೆ, ಕಲಬುರಗಿ ಉತ್ತರ-ರಹೀಮ್ ಪಟೇಲ್, ಹುಬ್ಬಳ್ಳಿ ಪೂರ್ವ- ಡಾ.ವಿಜಯ್ ಎಮ್ ಗುಂಡ್ರಾಳ್ ಇವರ ಹೆಸರನ್ನು ಪ್ರಕಟ ಮಾಡಿದೆ.