ಬರೇಲಿ, ಮಾ 02 (DaijiworldNews/HR): ಬರೇಲಿಯ ಸಿಬಿ ಗಂಜ್ ಪ್ರದೇಶದ ಬಂದಿಯಾ ಗ್ರಾಮದಲ್ಲಿ ಬೀದಿ ನಾಯಿಗಳ ಗುಂಪೊಂದು ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿದೆ.
ಪಾರಿ ಎಂಬ ಬಾಲಕಿಯ ದೇಹದಲ್ಲಿ 200 ಕಡೆಗಳಲ್ಲಿ ನಾಯಿ ಕಚ್ಚಿದ ಗುರುತುಗಳಿವೆ ಎಂದು ವೈದ್ಯರು ಹೇಳಿದ್ದಾರೆ.
ಬಾಲಕಿ ಮನೆಯ ಹೊರಗೆ ಇದ್ದಾಗ ಅಕ್ಕ ಸುನಿತಾ ರಾತ್ರಿಯ ಅಡುಗೆ ಮಾಡುತ್ತಿದ್ದು, ಮಗು ಆಟವಾಡಲು ಮೈದಾನಕ್ಕೆ ಹೋದ ಸಂದರ್ಭದಲ್ಲಿ ಏಳೆಂಟು ನಾಯಿಗಳು ದಾಳಿ ಮಾಡಿದ್ದು, ಆಕೆ ನೆರವಿಗಾಗಿ ಕೂಗಿಕೊಂಡಾಗ ಒಬ್ಬ ಯುವಕ ಆಕೆಯನ್ನು ರಕ್ಷಿಸಲು ಧಾವಿಸಿದ್ದು, ಆತನಿಗೂ ನಾಯಿಗಳು ಕಚ್ಚಿದೆ ಎನ್ನಲಾಗಿದೆ.
ಇನ್ನು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಾಗ, ಮಗು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.