ಗಾಂಧಿನಗರ, ಮಾ 03 (DaijiworldNews/DB): ವಿದೇಶಿ ಮದ್ಯ ಸರಕನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿಯೊಬ್ಬರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ನ ಮಹಿಳಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷೆ ಮೇಘನಾ ಪಟೇಲ್ ಬಂಧಿಸಲ್ಪಟ್ಟವರು. ಅಪರಿಚಿತರ ತಂಡವೊಂದು ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಿಚಾರಿಸಿದಾಗ ಕಾಂಗ್ರೆಸ್ ನಾಯಕಿಯ ಮೇಲೆ ಆರೋಪ ಕೇಳಿ ಬಂದಿತ್ತು.
ಮೇಘನಾ ಪಟೇಲ್ ಅವರಿಗಾಗಿ 7.5 ಲಕ್ಷ ರೂ.ಗಳ ವಿದೇಶಿ ಸರಕನ್ನು ತರಲಾಗಿದೆ ಎಂಬುದಾಗಿ ವಿಚಾರಣೆ ಕಾರು ಚಾಲಕ ಬಾಯ್ಬಿಟ್ಟಿದ್ದ. ಹೀಗಾಗಿ ಮೇಘನಾ ಅವರನ್ನು ಬಂಧಿಸಲಾಯಿತು. ಇನ್ನು 10 ಲಕ್ಷ ರೂ. ಮೌಲ್ಯದ ಮದ್ಯವನ್ನು ಅವರಿಂದ ವಶಪಡಿಸಿಕೊಳ್ಳಲಾಯಿತು ಎಂದು ಉಮ್ರಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.