ನವದೆಹಲಿ, ಮಾ 03 (DaijiworldNews/DB): ಕೇಂದ್ರ ಸಚಿವರ ಸೋಗಿನಲ್ಲಿ ಜನರಿಗೆ ವಂಚನೆ ಎಸಗುತ್ತಿದ್ದ ವ್ಯಕ್ತಿ ಮತ್ತು ಆತನ ಸಹಚರರನ್ನು ದೆಹಲಿ ವಿಶೇಷ ದಳದ ಪೊಲೀಸರು ಬಂಧಿಸಿದ್ದಾರೆ.
ನಕಲಿ ಕೇಂದ್ರ ಸಚಿವ ಸಂಜಯ್ ತಿವಾರಿ ಮತ್ತು ಆತನ ಮೂವರು ಸಹಚರರು ಬಂಧಿತರು. ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರಿಗೆ ಈತ ಕೇಂದ್ರ ಸಚಿವನ ಸೋಗಿನಲ್ಲಿ ಬಂದು ಧಮ್ಕಿ ಹಾಕಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಂಜಯ್ ತಿವಾರಿ ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಎಂಬುದಾಗಿ ಹೇಳಿಕೊಂಡು ಜನರನ್ನು ವಂಚಿಸಿ ಸಿಕ್ಕಿ ಬಿದ್ದಿದ್ದ. ಇದೀಗ ಮತ್ತೆ ಆತ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಪೊಲೀಸ್ ಅತಿಥಿಯಾಗಿದ್ದಾನೆ.