ನವದೆಹಲಿ, ಮಾ 03 (DaijiworldNews/HR): ಮೇಘಾಲಯದ ನೂತನ ಸಿಎಂ ಆಗಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಮಾರ್ಚ್ 7ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಮತ್ತು ಎನ್ಪಿಪಿ ಶಾಸಕ ಪ್ರೆಸ್ಟೋನ್ ಟೈನ್ಸಾಂಗ್ ಅವರು, ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮಾರ್ಚ್ 7 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಇಂದು ನಾವು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ ಮತ್ತು ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದು, ನಮ್ಮ ಬಳಿ ಸಾಕಷ್ಟು ಶಾಸಕರ ಸಂಖ್ಯೆಯಿದೆ ಎಂದು ಪ್ರೆಸ್ಟೋನ್ ಟೈನ್ಸಾಂಗ್ ಹೇಳಿದ್ದಾರೆ.