ನವದೆಹಲಿ, ಮಾ 03 (DaijiworldNews/DB): ಗುಜರಾತ್ ಹೈಕೋರ್ಟ್ನ ನ್ಯಾಯಾಧೀಶರಾಗಿ ವಿಕಲಚೇತನ ವಕೀಲ ಮೋಕ್ಸಾ ಕಿರಣ್ ಠಕ್ಕರ್ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ವಿಕಲಚೇತನರಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ. ಮೋಕ್ಸಾ ಕಿರಣ್ ಅವರೊಂದಿಗೆ ವಕೀಲ ದೇವನ್ ದೇಸಾಯಿ ಅವರ ಹೆಸರನ್ನೂ ಕೊಲಿಜಿಯಂ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಶಿಫಾರಸ್ಸು ಮಾಡಿದೆ.
ಇನ್ನು ಪರಿಶಿಷ್ಟ ಪಂಗಡದ ವಕೀಲ ಕಾರ್ಡಕ್ ಈಟೆ ಅವರನ್ನು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಕೂಡಾ ಪ್ರತ್ಯೇಕ ನಿರ್ಣಯವೊಂದರಲ್ಲಿ ಕೊಲಿಜಿಂ ಶಿಫಾರಸ್ಸು ಮಾಡಿದೆ ಎಂದು ವರದಿಯಾಗಿದೆ.