ನವದೆಹಲಿ, ಮಾ 04 (DaijiworldNews/MS): ಉಜ್ಬೆಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿರುವ ಕಫ್ ಸಿರಪ್ ತಯಾರಿಕೆ ಕಂಪನಿಯ ಮೂವರು ಸಿಬ್ಬಂದಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅತುಲ್ ರಾವತ್, ತುಹಿನ್ ಭಟ್ಟಾಚಾರ್ಯ ಮತ್ತು ಮೂಲ್ ಸಿಂಗ್ ಎಂದು ಗುರುತಿಸಲಾಗಿದೆ.
ನೋಯ್ಡಾ ಮೂಲದ ಮಾರಿಯೋನ್ ಬಯೋಟೆಕ್ ಕಂಪನಿ ತಯಾರಿಕೆಯ ಕಫ್ ಸಿರಪ್ ಸೇವಿಸಿ ಕಳೆದ ಡಿಸೆಂಬರ್ನಲ್ಲಿ ಮಧ್ಯ ಉಜ್ಬೆಕಿಸ್ತಾನದಲ್ಲಿ 18 ಮಂದಿ ಮಕ್ಕಳು ಮೃತಪಟ್ಟಿದರು. ಈ ಬೆಳವಣಿಗೆ ಬಳಿಕ ಭಾರತೀಯ ತನಿಖಾಧಿಕಾರಿಗಳು ಔಷಧ ತಯಾರಿ ಕಂಪನಿಯ ಸ್ಯಾಂಪಲ್ಗಳನ್ನು ಪಡೆದು ಪರಿಶೀಲಿಸಿದ್ದು, ಔಷಧ ಕಲಬೆರಕೆಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯಾಚರಣ ಮುಖ್ಯಸ್ಥರ ಹಾಗೂ ಇಬ್ಬರು ಕೆಮಿಸ್ಟ್ಗಳನ್ನು ಬಂಧಿಸಲಾಗಿದೆ.
ಪ್ರಕರಣ ವರದಿಯಾದ ಬಳಿಕ, ಮರಿಯನ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ಅನ್ನು ಮಕ್ಕಳಿಗೆ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚನೆ ನೀಡಿತ್ತು.
ಅಲ್ಲದೇ ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯದ ಪರೀಶೀಲನೆಯಲ್ಲಿ ಕೆಮ್ಮಿನ ಸಿರಪ್ಗಳಲ್ಲಿ ಎಥಿಲೀನ್ ಗ್ಲೈಕೋಲ್ನ ವಿಷಕಾರಿ ರಾಸಾಯನಿಕ ಪತ್ತೆಯಾಗಿತ್ತು.