ನವದೆಹಲಿ, ಮಾ 04 (DaijiworldNews/DB): ಆರ್ಥಿಕತೆಯ ಪ್ರೇರಕ ಶಕ್ತಿ ಎಂದರೆ ಮೂಲ ಸೌಕರ್ಯಗಳ ಅಭಿವೃದ್ದಿ. 2047ರ ವೇಳೆಗೆ ದೇಶ ಅಭಿವೃದ್ದಿ ಹೊಂದಿದ ದೇಶವಾಗಲು ಈ ಮೂಲ ಸೌಕರ್ಯಗಳ ಅಭಿವೃದ್ದಿಯೇ ಪ್ರಧಾನ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೂಲಸೌಕರ್ಯ ಮತ್ತು ಹೂಡಿಕೆ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ದೇಶದ ಮೂಲ ಸೌಕರ್ಯದಲ್ಲಿ ಹೆಚ್ಚಿನ ಅಭಿವೃದ್ದಿ, ಬೆಳವಣಿಗೆ ಕಾಣಲು ಈ ಬಾರಿಯ ಬಜೆಟ್ ಪೂರಕವಾಗಿದೆ ಎಂದರು.
ಆರ್ಥಿಕತೆಯ ಪ್ರೇರಕಶಕ್ತಿಯೇ ಮೂಲ ಸೌಕರ್ಯಗಳ ಅಭಿವೃದ್ದಿ. 2047ರ ವೇಳೆಗೆ ಇವುಗಳ ಸಮಗ್ರ ಅಭಿವೃದ್ದಿಯಾದರೆ ಅಭಿವೃದ್ದಿ ಹೊಂದಿದ ದೇಶವಾಗಿ ಭಾರತ ನಿಲ್ಲಲಿದೆ. ಹೀಗಾಗಿ ಈ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ ಹೆಚ್ಚು ಗಮನ ಹರಿಸಿದೆ. ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಯೋಜನೆಗಳ ಪಾತ್ರ ಈ ದಿಕ್ಕಿನಲ್ಲಿ ನಿರ್ಣಾಯಕ ಎಂದವರು ಅಭಿಪ್ರಾಯಪಟ್ಟರು.
ರಸ್ತೆ, ರೈಲ್ವೇ, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೂಡಾ ಆಧುನಿಕ ಮೂಲ ಸೌಕರ್ಯ ನಿರ್ಮಾಣಕ್ಕೆ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದರು.