ಚಿತ್ರದುರ್ಗ, ಮಾ 04 (DaijiworldNews/HR): ಲೋಕಾಯುಕ್ತವನ್ನು ದುರ್ಬಲಗೊಳಿಸಿ 59 ಪ್ರಕರಣಗಳನ್ನು ಮುಚ್ಚಿ ಹಾಕಿದ ಕಾಂಗ್ರೆಸ್ಗೆ ಪ್ರತಿಭಟಿಸುವ ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಗಳ ಕಚೇರಿಯಲ್ಲೇ 2 ಲಕ್ಷ ಹಣ ಸಿಕ್ಕಿತ್ತು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರಾ, ಅಂದು ಲೋಕಾಯುಕ್ತ ಇದ್ದಿದ್ದರೆ ಅರೆಸ್ಟ್ ಆಗುತ್ತಿದ್ದರು. ಆದರೆ ಲೋಕಾಯುಕ್ತ ದುರ್ಬಲಗೊಳಿಸಿದ್ದರು ಎಂದರು.
ಇನ್ನು ಭ್ರಷ್ಟಾಚಾರದ ವಿರುದ್ಧ ನಮ್ಮ ಸಮರ ಎನ್ನುವುದಕ್ಕೆ ಮಾಡಾಳ್ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿರುವುದೇ ಸಾಕ್ಷಿ ಎಂದು ಹೇಳಿದ್ದಾರೆ.