ಹುಬ್ಬಳ್ಳಿ, ಮಾ 04 (DaijiworldNews/HR): ಕರ್ನಾಟಕ ಮತ್ತು ಪಂಜಾಬ್ನಲ್ಲಿ ಒಂದೇ ರೀತಿಯ ಸಮಸ್ಯೆಗಳಿವೆ. ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬಿನಲ್ಲಿ ಮಾಡಿದ ಕೆಲಸ ಕರ್ನಾಟಕದಲ್ಲಿ ಮಾಡಲು ಸಿದ್ಧ. ಆರೋಗ್ಯ, ಶಿಕ್ಷಣ, ವಿದ್ಯುತ್, ಕುಡಿಯುವ ನೀರಿನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದೇವೆ. ಕರ್ನಾಟಕವನ್ನು ಸ್ವಚ್ಛ ಮಾಡಲು ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು. ಈಗಿರುವ ಸರ್ಕಾರ ತೆಗೆದು ಹಾಕಬೇಕು ಎಂದು ಪಂಜಾಬ್ ಸಿಎಂ ಭಗವಂತ ಮಾನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೆಹಲಿ ಮತ್ತು ಪಂಜಾಬ್ ಜನರಂತೆ ಕರ್ನಾಟಕದ ಜನರು ಕ್ರಾಂತಿಕಾರಿ ಬದಲಾವಣೆಗೆ ತೆರೆದುಕೊಳ್ಳಬೇಕು. ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದರು.
ಇನ್ನು ಕರ್ನಾಟಕದಲ್ಲಿರುವ ಸಮಸ್ಯೆಗಳೇ ಪಂಜಾಬಿನಲ್ಲಿವೇ, ವಿಶೇಷವಾಗಿ ರೈತರ ಸಮಸ್ಯೆಗಳು. ಕರ್ನಾಟಕ ಸರಕಾರ ಪಾಸ್ ಮಾಡಿರುವ ಮೂರು ಕೃಷಿ ಕಾಯ್ದೆ ಜಾರಿಯಿಂದಾಗಿ ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.