ಭುವನೇಶ್ವರ, ಮಾ 04 (DaijiworldNews/HR): ಭಾರತದ ನ್ಯಾಯಾಂಗದ ವ್ಯವಸ್ಥೆಯನ್ನು ಪ್ರತಿಪಕ್ಷಗಳು ಅನುಮಾನಿಸುವ ಮೂಲಕ ದೇಶದ ಪ್ರತಿಷ್ಠೆಯನ್ನು ಹಾಳುಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತದ ನ್ಯಾಯಾಂಗವನ್ನು ಪ್ರಶ್ನಿಸುವಂತಿಲ್ಲ. ಅದರಲ್ಲಿಯೂ ವಿಶೇಷವಾಗಿ ನ್ಯಾಯಾಧೀಶರ ನಿರ್ಧಾರವನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಎಂದರು.
ಕೆಲವೊಮ್ಮೆ ಭಾರತೀಯ ನ್ಯಾಯಾಂಗವು ಬಿಕ್ಕಟ್ಟಿನಲ್ಲಿದೆ ಎಂದು ಜಗತ್ತಿಗೆ ತಿಳಿಸಲು ದೇಶದ ಒಳಗೆ ಮತ್ತು ಹೊರಗಿನಿಂದ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ.