ನವದೆಹಲಿ, ಮಾ 06 (DaijiworldNews/HR): ವಿರೋಧ ಪಕ್ಷಗಳನ್ನು ಒಡೆಯಲು ಪ್ರಧಾನಿ ಮೋದಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂತ ಮತ್ತು ಮಹಾನ್ ಚೇತನರಾಗಿದ್ದು, ಅವರನ್ನು ಜೈಲಿಗೆ ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಬಡವರ ಶಾಪವನ್ನು ಎದುರಿಸಲಿದ್ದಾರೆ ಎಂದಿದ್ದಾರೆ
ಇನ್ನು ಯಾವುದೇ ಬಿಜೆಪಿಯೇತರ ಸರ್ಕಾರವು ರಾಜ್ಯಗಳಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದಿರಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಆರೋಪಿಸಿದ್ದಾರೆ.