ಹಾವೇರಿ, ಮಾ 06 (DaijiworldNews/HR): ಬೊಮ್ಮಾಯಿ ಸರ್ಕಾರ ಎನ್ನುವುದಕ್ಕಿಂತ ಭ್ರಷ್ಟಾಸುರ ಸರ್ಕಾರ ಎನ್ನಬೇಕು. ಬೊಮ್ಮಾಯಿ ಸರ್ಕಾರ ಅಪರಾಧಿಗಳ ಜೊತೆಗೆ ಶಾಮೀಲಾಗಿದ್ದು, ಬಿಜೆಪಿ ಶಾಸಕನ ಮನೆಯಲ್ಲಿ ಸಿಕ್ಕ 8 ಕೋಟಿ ಹಣ ಮೇಲೆ ಹೋಗುತ್ತಿತ್ತು. ಹೀಗಾಗಿ ಶಾಸಕರನ್ನು ಅರೆಸ್ಟ್ ಮಾಡಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ ಭ್ರಷ್ಟಾಸುರ ಸರ್ಕಾರ. ಬಿಜೆಪಿ ಅಂದರೆ ಭಾರತೀಯ ಜನತಾ ಪಾರ್ಟಿ ಅಲ್ಪ, ಭ್ರಷ್ಟ ಜನತಾ ಪಾರ್ಟಿ ಎಂದರು.
ಇನ್ನು ಬಿಜೆಪಿಯವರು 40% ಸರ್ಕಾರ ಎಂಬ ಆರೋಪಕ್ಕೆ ಸಾಕ್ಷಿ ತಗೊಂಡು ಬನ್ನಿ ಅಂತ ಹೇಳುತ್ತಿದ್ದು, ಈಗ 8 ಕೋಟಿ ಸಿಕ್ಕು ನಾಲ್ಕು ದಿನ ಕಳೆಸಿದೆ. ಆದರೂ ವಿರೂಪಾಕ್ಷಪ್ಪ ಅವರನ್ನು ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.