ಬೆಳಗಾವಿ, ಮಾ 06 (DaijiworldNews/MS): ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಸೂಲಿ ಕೆಲಸ ಪ್ರಾರಂಭಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ರಾಜ್ಯದೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಲೆಕ್ಷನ್ ಸಮೀಪದಲ್ಲಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಪಾವಧಿಯ ಟೆಂಡರ್ ಮತ್ತು ಕಾರ್ಯಾದೇಶಗಳನ್ನು ಪಾಸ್ ಮಾಡುವ ಮೂಲಕ ವಸೂಲಿ ಕೆಲಸ ಶುರುಮಾಡಿದ್ದಾರೆ.
ಅಲ್ಪಾವಧಿಯ ಟೆಂಡರ್ ಗಳನ್ನು ಪಾಸ್ ಮಾಡುವಂತೆ ತಾಲ್ಲೂಕು ಮತ್ತು ಎಲ್ಲಾಮಟ್ಟದ ಅಧಿಕಾರಿಗಳ ಒತ್ತಡ ಹೇರಲಾಗುತ್ತಿದೆ, ಅಧಿಕಾರಿಗಳು ತಮ್ಮಲ್ಲಿಗೆ ಬಂದು ದೂರುಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.