ಪಣಜಿ, ಮಾ 06 (DaijiworldNews/HR): ಬಳಕೆಯಲ್ಲಿ ಇಲ್ಲದ 65 ಕಾನೂನುಗಳು ಮತ್ತು ಇತರ ನಿಬಂಧನೆಗಳನ್ನು ರದ್ದುಗೊಳಿಸಲು ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೇಶದ ಪ್ರತಿಯೊಂದು ಭಾಗದಲ್ಲೂ, ಪ್ರತಿಯೊಬ್ಬ ನಾಗರಿಕನು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಕಲ್ಯಾಣ ರಾಜ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಮಾತನ್ನು ಕೇಳುವುದು ಬಹಳ ಮುಖ್ಯ. ಮೋದಿ ಸರ್ಕಾರ ಈ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಇನ್ನು ಸಾಮಾನ್ಯ ನಾಗರಿಕರಿಗೆ ಜೀವನವನ್ನು ಸುಲಭಗೊಳಿಸಲು ಸರ್ಕಾರದ ನೀತಿಗಳು ಯಶಸ್ವಿಯಾಗಿದ್ದು, ಕಾನೂನುಗಳು ಜನರಿಗಾಗಿ ಇರಬೇಕು. ಅವು ಅಡೆತಡೆ ನಿರ್ಮಾಣ ಮಾಡುವುದಾದರೆ ಅಂತಹ ನಿಬಂಧನೆಗಳನ್ನು ತೆಗೆದುಹಾಕಲು ಸರ್ಕಾರ ಬದ್ಧವಾಗಿದೆ. ಬಳಕೆಯಲ್ಲಿ ಇಲ್ಲದ 1,486 ಬಳಕೆಯಲ್ಲಿಲ್ಲದ ಮತ್ತು ಅನಗತ್ಯ ಕಾನೂನುಗಳನ್ನು ಕಳೆದ ಎಂಟೂವರೆ ವರ್ಷಗಳಲ್ಲಿ ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ.