ನವದೆಹಲಿ, ಮಾ 06 (DaijiworldNews/HR): ಆರೋಗ್ಯ ಕ್ಷೇತ್ರದಲ್ಲಿ ವಿದೇಶಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ನಮ್ಮ ಸರಕಾರ ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,ಕೊರೊನಾವು ಉತ್ತುಂಗದಲ್ಲಿದ್ದಾಗ ಔಷಧಿಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳಂತಹ ಜೀವ ರಕ್ಷಕಗಳು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ವಿದೇಶಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ನಮ್ಮ ಸರಕಾರ ಸತತವಾಗಿ ಪ್ರಯತ್ನಿಸುತ್ತಿದೆ ಎಂದರು.
ಇನ್ನು ಭಾರತದ ಆರೋಗ್ಯ ಕ್ಷೇತ್ರವು ಸ್ವಾತಂತ್ರ್ಯದ ನಂತರ ದಶಕಗಳವರೆಗೆ ಸಮಗ್ರ ವಿಧಾನ ಮತ್ತು ದೀರ್ಘಾವಧಿಯ ದೃಷ್ಟಿಯ ಕೊರತೆಯಿಂದ ನಾಶವಾಯಿತು ಆದರೆ ನಮ್ಮ ಸರಕಾರವು ಅದನ್ನು ಆರೋಗ್ಯ ಸಚಿವಾಲಯಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ ಮತ್ತು ಅದನ್ನುಇಡೀ ಸರಕಾರದ ದೃಷ್ಟಿಕೋನದಿಂದ ವ್ಯವಹರಿಸಿದೆ ಎಂದು ಹೇಳಿದ್ದಾರೆ.