ನವದೆಹಲಿ, ಮಾ 06 (DaijiworldNews/HR): ಭಾರತಕ್ಕೆ ದ್ರೋಹ ಮಾಡಬೇಡಿ, ರಾಹುಲ್ ಗಾಂಧಿ ಜೀ. ಭಾರತದ ವಿದೇಶಾಂಗ ನೀತಿಗೆ ಆಕ್ಷೇಪಣೆಗಳು ಈ ವಿಷಯದ ಬಗ್ಗೆ ನಿಮ್ಮ ಅಲ್ಪ ತಿಳುವಳಿಕೆಗೆ ಸಾಕ್ಷಿಯಾಗಿದೆ. ನೀವು ವಿದೇಶಿ ನೆಲದಿಂದ ಭಾರತದ ಬಗ್ಗೆ ಹರಡುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ತಮ್ಮ ವೈಫಲ್ಯಗಳನ್ನು ಮರೆಮಾಚುವ ಪಿತೂರಿಯ ಭಾಗವಾಗಿ ರಾಹುಲ್ ಗಾಂಧಿ ವಿದೇಶಿ ನೆಲದಿಂದ ಭಾರತವನ್ನು ದೂಷಿಸಲು ಆಶ್ರಯಿಸಿದ್ದಾರೆ ಎಂದರು.
ಇನ್ನು ಅವರ ಭಾಷೆ, ಅವರ ಆಲೋಚನೆಗಳು, ಅವರ ಕಾರ್ಯಶೈಲಿ, ಎಲ್ಲವೂ ಶಂಕಿತವಾಗಿದೆ. ಇದೇ ಮೊದಲಲ್ಲ ಪದೇ ಪದೇ ಇತರ ಹೇಳಿಕೆ ನೀಡುತ್ತಾ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.