ನವದೆಹಲಿ, ಮಾ 07 (DaijiworldNews/HR): ಮಿಲಿಟರಿ ರಚನೆಗಳು ಮತ್ತು ಘಟಕಗಳು ತಮ್ಮ ಸಿಬ್ಬಂದಿಯನ್ನು ಚೀನೀ ಮೊಬೈಲ್ ಫೋನ್ಗಳನ್ನು ಎಚ್ಚರಿಕೆಯಿಂದ ಬಳಸುವಂತೆ ಭಾರತದ ರಕ್ಷಣಾ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಮಿಲಿಟರಿ ಗುಪ್ತಚರ ಸಂಸ್ಥೆಗಳು ಸೈನಿಕರು ಮತ್ತು ಅವರ ಕುಟುಂಬಗಳಿಗೆ ಚೀನಾದಿಂದ ಫೋನ್ಗಳನ್ನು ಖರೀದಿಸದಂತೆ ಅಥವಾ ಅವರು ತಯಾರಿಸಿದ ಫೋನ್ಗಳನ್ನು ಬಳಸದಂತೆ ಕೇಳಿಕೊಂಡಿವೆ.
ಗುಪ್ತಚರ ಸಂಸ್ಥೆಗಳು ಸಮಾಲೋಚನೆಗಳ ಜೊತೆಗೆ ಅಂತಹ ಮೊಬೈಲ್ ಫೋನ್ಗಳ ಪಟ್ಟಿಯನ್ನು ಕೂಡ ನೀಡಿದ್ದು, ಇದು ದೇಶದ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ. ಇವುಗಳಲ್ಲಿ ಈ ಚೈನೀಸ್ ಮೊಬೈಲ್ ಫೋನ್ಗಳು ಸೇರಿವೆ. ವಿವೋ, ಒಪ್ಪೋ Xiaomi, ಒನ್ ಪ್ಲಸ್, ZTE, ಜಿಯೋನಿ, ಆಸಸ್, infinix ಮತ್ತು ಇತರೆ ಫೋನ್ಗಳು ಸೇರಿವೆ.
ಇನ್ನು ಈ ಹಿಂದೆ ಕೂಡ ಗುಪ್ತಚರ ಸಂಸ್ಥೆಗಳು ಚೀನಾದ ಮೊಬೈಲ್ ಫೋನ್ಗಳು ಮತ್ತು ಅಪ್ಲಿಕೇಶನ್ಗಳ ಬಗ್ಗೆ ಜಾಗರೂಕರಾಗಿದ್ದರು ಮತ್ತು ಅವರ ಸಲಹೆಯನ್ನು ಅನುಸರಿಸಿ, ಚೀನಾದಲ್ಲಿ ಅಭಿವೃದ್ಧಿಪಡಿಸಿದ ಹಲವಾರು ಅಪ್ಲಿಕೇಶನ್ಗಳನ್ನು ಮಿಲಿಟರಿ ಸಿಬ್ಬಂದಿಯ ಫೋನ್ಗಳಿಂದ ತೆಗೆದುಹಾಕಲಾಗಿತ್ತು.