ಬೆಂಗಳೂರು, ಮಾ 07 (DaijiworldNews/MS): ಬೆಂಗಳೂರಿನಲ್ಲಿ ಪ್ರತಿಷ್ಠಿತ ಐಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಪ್ಕಾಕ್ಸ್ ಕಾನ್ ಕಂಪನಿಯು ಹೂಡಿಕೆ ಮಾಡಲು ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ ಎಂಬ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಅಪ್ಪಟ್ಟ ಸುಳ್ಳು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಸರಣಿ ಟ್ವೀಟ್ ಮಾಡುವ ಮೂಲಕ ಒಪ್ಪಂದದ ವಿಚಾರವನ್ನು ಪ್ರಶ್ನಿಸಿದ್ದಾರೆ.
ಫಾಕ್ಸ್ಕಾನ್ ಜೊತೆ ಸುಳ್ಳು ಒಪ್ಪಂದದ ಘೋಷಣೆ ಮಾಡಿ ಮರ್ಯಾದೆ ಹರಾಜಾಕಿಕೊಂಡ ಬೊಮ್ಮಾಯಿ, ಈಗ 'ಲೆಟರ್ ಆಫ್ ಇಂಟೆಂಟ್' ಬಿಡುಗಡೆ ಮಾಡಿ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ.ಲೆಟರ್ ಆಫ್ ಇಂಟೆಂಟ್ ಎಂದರೆ ಹೂಡಿಕೆಗೆ ಆಸಕ್ತಿ ವಹಿಸಿದ ಉದ್ದೇಶಿತ ಪತ್ರವೇ ಹೊರತು ಒಪ್ಪಂದವಲ್ಲ.ಯಾಕೇ ಈ ಸರ್ಕಸ್ ಬೊಮ್ಮಾಯಿಯವರೆ ಎಂದು ಪ್ರಶ್ನಿಸಿದ್ದಾರೆ.
ʻʻಫಾಕ್ಸ್ಕಾನ್ ಹಾಗೂ ರಾಜ್ಯ ಸರ್ಕಾರದ ಮಧ್ಯೆ ನಡೆದಿರುವುದು ಕೇವಲ ಲೆಟರ್ ಆಫ್ ಇಂಟೆಂಟ್ ಮಾತ್ರ. ಬೊಮ್ಮಾಯಿಯವರಿಗೆ ಲೆಟರ್ ಆಫ್ ಇಂಟೆಂಟ್ಗೂ ಒಪ್ಪಂದಕ್ಕೂ ವ್ಯತ್ಯಾಸ ಗೊತ್ತಿಲ್ಲವೇ.? ಬೊಮ್ಮಾಯಿಯವರು ಯಾರನ್ನು ಮೂರ್ಖರನ್ನಾಗಿ ಮಾಡಲು ಫಾಕ್ಸ್ಕಾನ್ ಜೊತೆ 5740 ಕೋಟಿ ಹೂಡಿಕೆಯ ಒಪ್ಪಂದವಾಗಿದೆ ಎಂದು ಡಂಗುರ ಸಾರಿಸಿದರು.?ʼʼ ಎಂದು ಪ್ರಶ್ನಿಸಲಾಗಿದೆ.
ʻʻಬೊಮ್ಮಾಯಿಯವರೇ ಸುಳ್ಳು ಹೇಳುವುದು ಒಂದು ಕಲೆ. ಸುಳ್ಳು ಹೇಳುವ ಮುನ್ನ ನೀವು ‘ಸುಳ್ಳಿನ ವಿಶ್ವಗುರು’ ಮೋದಿಯವರಿಂದ ಸುಳ್ಳು ಹೇಳುವುದು ಹೇಗೆ ಎಂಬ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಪಡೆಯಿರಿ. ಇಲ್ಲದೆ ಹೋದರೆ ಫಾಕ್ಸ್ಕಾನ್ ವಿಚಾರದಲ್ಲಿ ಸುಳ್ಳು ಹೇಳಿ ನಡುಬೀದಿಯಲ್ಲಿ ಬೆತ್ತಲಾದಂತೆ ಪದೇಪದೆ ಬೆತ್ತಲಾಗುವ ಪ್ರಸಂಗ ನಿಮಗೆದುರಾಗಬಹುದು.ʼʼ ಎಂದು ಸಿಎಂ ಬೊಮ್ಮಾಯಿ ನಡೆ ಕುರಿತು ಟೀಕಿಸಿದ್ದಾರೆ.