ಹೈದರಾಬಾದ್, ಮಾ 07 (DaijiworldNews/DB): ದೆಹಲಿ ಮದ್ಯ ನೀತಿ ಹಗರಣ ಪ್ರಕರಣ ಸಂಬಂಧಿಸಿ ಉದ್ಯಮಿಯೊಬ್ಬರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.
ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧಿತರು. ಅರುಣ್ ರಾಮಚಂದ್ರ ಪಿಳ್ಳೆ ಅವರು ಇನ್ನೋಸ್ಪಿರಿಟ್ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಎಂಬವರಿಂದ ಲಂಚ ಸಂಗ್ರಹಿಸಿ ಇತರ ಆರೋಪಿಗಳಿಗೆ ಹಸ್ತಾಂತರಿಸಿದ್ದರು ಎಂಬ ಆರೋಪವನ್ನು ತನಿಖಾ ಸಂಸ್ಥೆಗಳು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಅವರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಇನ್ನು ಇದೇ ವೇಳೆ ಇಂಡೋಸ್ಪಿರಿಟ್ಸ್ನ ಶೇಕಡಾ 32.5 ಷೇರುಗಳನ್ನು ದಕ್ಷಿಣ ಮದ್ಯ ತಯಾರಕರ ಗುಂಪಿನಲ್ಲಿ ಹೆಚ್ಚು ಪ್ರಸಿದ್ದಿಯಾಗಿರುವ ಅರುಣ್ ಅವರಿಗೆ ನೀಡಲಾಗಿದೆ ಎಂಬ ಆರೋಪವನ್ನು ಇಡಿ ಮಾಡಿದೆ. ವಟ್ಟಿನಗುಲಪಲ್ಲಿಯಲ್ಲಿ ಅರುಣ್ ಅವರಿಗೆ ಸೇರಿದ 2.2 ಕೋಟಿ ಮೌಲ್ಯದ ಭೂಮಿಯನ್ನು ಕೂಡಾ ಇಡಿ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.