ನವದೆಹಲಿ, ಮಾ 07 (DaijiworldNews/DB): ಎಚ್3ಎನ್2 ವೈರಸ್ ಕೋವಿಡ್ನಂತೆ ಹರಡುತ್ತದೆ ಎಂದು ಏಮ್ಸ್ ಮಾಜಿ ಮುಖ್ಯಸ್ಥ ಹಾಗೂ ಇಂಟರ್ನಲ್ ಮೆಡಿಸಿನ್ ಮತ್ತು ರೆಸ್ಪಿರೇಟರಿ ಮತ್ತು ಸ್ಲೀಪ್ ಮೆಡಿಸಿನ್ ಸಂಸ್ಥೆಯ ಅಧ್ಯಕ್ಷ ಮತ್ತು ವೈದ್ಯಕೀಯ ಶಿಕ್ಷಣದ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ದೇಶದಲ್ಲಿ ಈ ವೈರಸ್ ಉಲ್ಬಣಗೊಳ್ಳುತ್ತಿದೆ. ಜನ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ನಂತೆಯೇ ಎಚ್3ಎನ್2 ವೈರಸ್ ಹರಡುವ ಆತಂಕವಿದೆ. ಪ್ರತಿ ವರ್ಷ ರೂಪಾಂತರಗೊಳ್ಳುವ ಸಂಭವವೂ ಇದೆ ಎಂದಿದ್ದಾರೆ.
ಯಾವುದೇ ಕಾಯಿಲೆಗಳಿಗೂ ಮುನ್ನೆಚ್ಚರಿಕೆಯೇ ಮದ್ದು. ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಜ್ವರ, ತಲೆನೋವು, ಕೆಮ್ಮುನಂತಹ ಯಾವುದೇ ಲಕ್ಷಣಗಳು ಕಂಡು ಬಂದರೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದವರು ಹೇಳಿದ್ದಾರೆ.