ನವದೆಹಲಿ, ಮಾ 07 (DaijiworldNews/HR): ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಇನ್ಸಾಫ್ ಎಂಬ ಹೊಸ ವೇದಿಕೆ ಸಿದ್ದವಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಘೋಷಿಸಿದ್ದಾರೆ.
ನಾಗರಿಕರ ವಿರುದ್ಧ ಕೆಲಸ ಮಾಡುವ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದು ಆರೋಪಿಸಿರುವ ಕಪಿಲ್ ಸಿಬಲ್,ಮಾರ್ಚ್ 11 ರಂದು ಜಂತರ್ ಮಂತರ್ನಲ್ಲಿ ಹೊಸ ವೇದಿಕೆಯ ಸಾರ್ವಜನಿಕ ಸಭೆ ನಡೆಸಲಾಗುವುದು. ಇದು ದೇಶದ ಹೊಸ ದೃಷ್ಟಿಕೋನವನ್ನು ಮುಂದಿಡಲಿದೆ ಎಂದಿದ್ದಾರೆ.
ಇನ್ನು ಮಾರ್ಚ್ 11 ರಂದು ಜಂತರ್ ಮಂತರ್ನಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಮತ್ತು ಸಾಮಾನ್ಯ ಜನರು ಸೇರಿದಂತೆ ಎಲ್ಲರಿಗೂ ಭಾಗವಹಿಸಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.