ಬೆಂಗಳೂರು, ಮಾ 07 (DaijiworldNews/MS): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಬಂಧನ ಭೀತಿ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಸದ್ಯ ಬಿಗೆ ರಿಲೀಫ್ ಸಿಕ್ಕಿದೆ.
ಇಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಮೂರ್ತಿ ನಟರಾಜನ್ ಅವರು ವಿಚಾರಣೆ ನಡೆಸಿ ಮಾಡಳ್ ವಿರೂಪಾಕ್ಷಪ್ಪಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ದಾಖಲೆ ಸಲ್ಲಿಸುವವರೆಗೆ ಹೈಕೋರ್ಟ್ ಏಕಸದಸ್ಯ ಪೀಠ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ನೀಡಿದೆ. 5 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಕೆ.ನಟರಾಜನ್ ಗೆ ಸೂಚಿಸಿದ್ದು, ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಖಡಕ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ವಿರೂಪಕ್ಷ ವಿರುದ್ದ ಎಫ್ ಐ ಆರ್ ನಲ್ಲಿ ಯಾವುದೇ ಆರೋಪಗಳಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಕೆ. ಸುಮನ್ ವಾದ ಮಂಡಿಸಿದರು.