ಹಾಸನ, ಮಾ 07 (DaijiworldNews/DB): ಅರಕಲಗೂಡಿನ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಎ. ಮಂಜು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ್ದಾರೆ.
ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ಶಕ್ತಿ ಮೀರಿ ಪ್ರಯತ್ನಿಸಬೇಕು. ಇನ್ನು ಮುಂದೆ ಜೆಡಿಎಸ್ ಪರ ಕೆಲಸ ಮಾಡಲು ಎಲ್ಲರೂ ತೊಡಗಿಸಿಕೊಳ್ಳಬೇಕು. ನಾನೇ ಇಲ್ಲಿನ ಅಭ್ಯರ್ಥಿಯಾಗಿದ್ದು, ನನ್ನನ್ನು ಗೆಲ್ಲಿಸಲು ತೊಡಗಿಸಿಕೊಳ್ಳಿ ಎಂದರು.
ಅರಕಲಗೂಡಿ ಕ್ಷೇತ್ರದಿಂದ ಎ. ಮಂಜು ಅವರನ್ನೇ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಖಾತ್ರಿಯಾಗಿದೆ. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಅವರನ್ನು ಎ. ಮಂಜು ಈಗಾಗಲೇ ಭೇಟಿ ಮಾಡಿದ್ದಾರೆ. ಇನ್ನು ಅರಕಲಗೂಡಿನ ಜೆಡಿಎಸ್ ಶಾಸಕ ರಾಮಸ್ವಾಮಿ ಪಕ್ಷದಿಂದ ಅಂತ ಕಾಯ್ದುಕೊಂಡಿರುವುದರಿಂದ ಎ. ಮಂಜು ಅವರಿಗೆ ಟಿಕೆಟ್ ಫಿಕ್ಸ್ ಆಗಿದೆ. ಈ ಹಿಂದೆ ಎ. ಮಂಜು ಜೆಡಿಎಸ್ ವಿರುದ್ದ ಮಾತನಾಡುತ್ತಿದ್ದರು.