ನವದೆಹಲಿ, ಮಾ 08 (DaijiworldNews/HR): ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಚೀನಾದ ಬೆದರಿಕೆ ಏನೂ ಅನ್ನೋದೆ ಅರ್ಥವಾಗಿಲ್ಲ. ಚೀನಾ ಒಡ್ಡುತ್ತಿರುವ ಬೆದರಿಕೆಗೆಯನ್ನು ಜೈಶಂಕರ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಚೀನಾ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ಬೆಂಬಲಿಸಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದರು.
ಇನ್ನು ಚೀನಾ ಈಗಾಗಲೇ 2,000 ಚದರ ಕಿಲೋಮೀಟರ್ ಭಾರತದ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿ ಮಾತು ತದ್ವಿರುದ್ಧವಾಗಿದೆ. ಯಾರೂ ಕೂಡ ಒಂದು ಇಂಚು ಜಾಗ ಆಕ್ರಮಿಸಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಚೀನಾ ವಿರುದ್ಧ ಗಡಿ ವಿಚಾರದಲ್ಲಿ ಭಾರತ ಅತ್ಯಂತ ಎಚ್ಚರಿಕೆ ಹೆಜ್ಜೆ ಇಡಬೇಕು. ಚೀನಾ ಆಕ್ರಮಣಕಾರಿ ಮನೋಭಾವ ಹೊಂದಿದೆ ಎಂದು ಹೇಳಿದ್ದಾರೆ.