ನವದೆಹಲಿ, ಮಾ 08 (DaijiworldNews/HR): ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಶ್ರದ್ಧಾ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಯಾಗಿರುವ ಆಫ್ತಾಬ್ ಪೂನವಾಲಾ ಮಾಂಸವನ್ನು ಹೇಗೆ ಸಂರಕ್ಷಿಸಬೇಕು ಎಂದು ತಿಳಿಯಲು ಬಾಣಸಿಗರಿಂದ ತರಬೇತಿ ಪಡೆದಿದ್ದರು ಎಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೂನವಾಲಾ ತನ್ನ ಗೆಳತಿ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಿ 35 ತುಂಡುಗಳಾಗಿ ಕತ್ತರಿಸಿ ಅಮಾನವೀಯವಾಗಿ ಹತ್ಯೆ ಮಾಡಿ ಬಳಿಕ ಆಕೆಯ ಮೃತ ದೇಹವನ್ನು ಆರೋಪಿ ಆಫ್ತಾಬ್ 300-ಲೀಟರ್ ಫ್ರಿಜ್ನಲ್ಲಿ ಸುಮಾರು ಮೂರು ವಾರಗಳ ಕಾಲ ಸಂರಕ್ಷಿಸಿದ್ದನು.
ಇನ್ನು ಆರೋಪಿ ಮಾಂಸವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಹೋಟೆಲ್ನಲ್ಲಿ ತರಬೇತಿಗೆ ಒಳಗಾಗಿದ್ದಾನೆಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.