ಬೆಂಗಳೂರು, ಮಾ 08 (DaijiworldNews/HR): ನಟ ಪ್ರಕಾಶ್ ರಾಜ್ ಅವರು ಮೊದಲಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದ್ದು, ಈಗ ಕನ್ನಡ ಭಾಷೆಯ ಪರ ಮಾತನಾಡಿದ್ದಾರೆ.
ಇನ್ನು ಈ ಫೋಟೋವನ್ನು ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಖಾ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ತಮಿಳುನಾಡು ಪೊಲೀಸರೇ ಪ್ರಕಾಶ್ ರಾಜ್ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದೀರೇ ಎಂದು ಪ್ರಶ್ನಿಸಿದ್ದಾರೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್, ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ.. ಹೆದರೊಲ್ಲ, ಅಷ್ಟೇ’ ಎಂದು ಪ್ರಕಾಶ್ ರಾಜ್ ಅವರು ಶಶಾಂಕ್ ಶೇಖರ್ ಟ್ವೀಟ್ಗೆ ಉತ್ತರಿಸಿದ್ದಾರೆ.
ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಅಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ ಎಂದಿದ್ದಾರೆ.