ನವದೆಹಲಿ, ಮಾ 09 (DaijiworldNews/DB): ರಾಹುಲ್ ಗಾಂಧಿಯವರು ದೇಶವನ್ನು ವಿಭಜಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ. ದೇಶದ ಏಕತೆಗೆ ಅವರು ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಲಂಡನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವ ವೇಳೆ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಹೊರಿಸಿರುವ ಆರೋಪದ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಕಾಂಗ್ರೆಸ್ನ ಸ್ವಯಂಘೋಷಿತ ರಾಜಕುಮಾರ. ಅವರು ಎಲ್ಲ ಮಿತಿಗಳನ್ನು ದಾಟಿ ವಿದೇಶೀ ನೆಲದಲ್ಲಿ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ದೇಶದ ಏಕತೆಗೆ ಅವರೊಬ್ಬ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯರಿಗೆ ರಾಹುಲ್ ಗಾಂಧಿ ಪಪ್ಪು ಎಂಬುದು ತಿಳಿದಿದೆ. ಆದರೆ ಇದು ವಿದೇಶಿಗರಿಗೆ ಗೊತ್ತಿಲ್ಲ. ಅವರ ದೇಶ ವಿರೋಧಿ ಹೇಳಿಕೆಗಳನ್ನು ಕೆಲವು ದೇಶ ವಿರೋಧಿ ಶಕ್ತಿಗಳು ದೇಶದ ಘನತೆ ಹಾಳು ಮಾಡಿಕೊಳ್ಳಲು ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.