ಮೈಸೂರು, ಮಾ 09 (DaijiworldNews/MS): ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿರುವಂತೆಯೇ 'ಬಾಂಬೆ ರಿಟರ್ನ್ ಡೇಸ್' ಎಂಬ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದೆ. ಆಪರೇಷನ್ ಕಮಲದ ವೇಳೆ 17 ಶಾಸಕರು ಬಾಂಬೆ ಸೇರಿದ್ದು, ಸಮ್ಮಿಶ್ರ ಸರ್ಕಾರದ ಪತನದ ವೇಳೆ ನಡೆದ ಬೆಳವಣಿಗೆಗಳೇ ಈ "ಬಾಂಬೆ ರಿಟರ್ನ್ ಡೇಸ್" ಪುಸ್ತಕದ ಮೂಲಕ ಹೊರಬರುತ್ತಿದೆ.
ಈ ಪುಸ್ತಕ ಬರೆದಿರೋದು ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಅವರಲ್ಲ. ಮೈಸರಿನ ವೀರಭದ್ರಪ್ಪ ಬಿಸ್ಲಳ್ಳಿ ಎನ್ನುವವರು ಈ ಪುಸ್ತಕ ಬರೆದಿದ್ದು, 200 ಪುಟಗಳನ್ನು ಹೊಂದಿದೆ.ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾಗಿರುವ ವೀರಭದ್ರಪ್ಪ ಬಿಸ್ಲಳ್ಳಿ ಬರೆದಿರುವ ಈ ಪುಸ್ತಕಕ್ಕೆ ಮೈಸೂರಿನ ವಿಶ್ವಯ್ಯ ಬುಕ್ಹೌಸ್ ಮಾರಾಟದ ಅನುಮತಿ ಪಡೆದುಕೊಂಡಿದೆ.
ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಅವರು ಕೂಡಾ ಸಮ್ಮಿಶ್ರ ಸರ್ಕಾರದ ಪತನದ ವೇಳೆ ನಡೆದ ವಿದ್ಯಮಾನಗಳ ಕುರಿತಾಗಿ ವಿಧಾನ "ಬಾಂಬೆ ಫೈಲ್ಸ್ "ಪುಸ್ತಕ ಹೊರತರುವುದಾಗಿ ಹೇಳಿದ್ದಾರೆ. ವಿಶ್ವನಾಥ್ ಅವರ ಪುಸ್ತಕವೂ ಈ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ.