ಚಂಡೀಗಢ, ಮಾ 11 (DaijiworldNews/HR): ಪಂಜಾಬ್ನ ಮಾಜಿ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ವಿರುದ್ಧ ಅದಾಯದ ಮೂಲಕ್ಕಿಂತ ಅಧಿಕ ಸಂಪತ್ತು ಕ್ರೋಢೀಕರಿಸಿದ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆ ವಿರುದ್ಧ ಲುಕೌಟ್ ನೋಟಿಸ್ ನೀಡಿದೆ.
ಲುಕೌಟ್ ನೋಟಿಸ್ ನೀಡಿರುವ ಕ್ರಮವನ್ನು ದೃಢಪಡಿಸಿರುವ ವಿಚಕ್ಷಣಾ ವಕ್ತಾರರು, ಚನ್ನಿ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದ್ದು, ದೇಶದಿಂದ ಅವರು ಹೊರ ಹೋಗುವಂತಿಲ್ಲ. ತನಿಖೆಗೆ ಹಾಜರಾಗಲು ಅವರಿಗೆ ಶೀಘ್ರವೇ ಸಮನ್ಸ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನನು ಅಧಿಕ ಸಂಪತ್ತು ಕ್ರೋಢೀಕರಿಸಿದ ಪ್ರಕರಣದಲ್ಲಿ ಚನ್ನಿ ವಿರುದ್ಧ ನಿಗಾ ಇಡಲಾಗಿದೆ ಎಂದು ಮುಖ್ಯಮಂತ್ರಿ ಭಗವಾನ್ ಸಿಂಗ್ ಮಾನ್ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು.