ನವದೆಹಲಿ, ಮಾ 11 (DaijiworldNews/DB): ಖಲಿಸ್ತಾನಿ ಭಾವನೆಗಳನ್ನು ವ್ಯಕ್ತಪಡಿಸುವ ವಿಚಾರಗಳ ಪರವಾಗಿ ವೀಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಕನಿಷ್ಟ 6 ಯೂಟ್ಯೂಬ್ ಚಾನೆಲ್ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.
ವಿದೇಶದಿಂದ ಸುಮಾರು 6-8 ಯೂಟ್ಯೂಬ್ ಚಾನೆಲ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳು ಖಲಿಸ್ತಾನಿ ಭಾವನೆಗಳ ಪರ ವೀಡಿಯೋಗಳನ್ನು ಪ್ರಸಾರಿಸಿದ ಕಾರಣ ಕಳೆದ ಹತ್ತು ದಿನಗಳಿಂದ ಕನಿಷ್ಟ ಆರು ಚಾನೆಲ್ ಗಳುಗೆ ನಿರ್ಬಂಧ ಹೇರಲಾಗಿದೆ. ಪಂಜಾಬಿ ಭಾಷೆಯಲ್ಲಿರುವ ಈ ಚಾನೆಲ್ ಗಳಲ್ಲಿ ಪ್ರಸಾರಿಸಲ್ಪಟ್ಟ ವೀಡಿಯೋಗಳು ಗಡಿ ರಾಜ್ಯಗಳ ಜನರಿಗೆ ಸಮಸ್ಯೆ ಉಂಟಯ ಮಾಡುವಂತಿದ್ದವು ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುವ ಆಕ್ಷೇಪಾರ್ಹ ವಿಚಾರಗಳನ್ನು ಹೊಂದಿರುವ ಯೂಟ್ಯೂಬ್ ಚಾನೆಲ್ ಗಳನ್ನು ತೆಗೆದು ಹಾಕಲು ಯೂಟ್ಯೂಬ್ ಗೆ ಸ್ವಲ್ಪ ತೊಡಕುಂಟಾಗುತ್ತಿದೆ. ಭಾಷೆಯನ್ನು ಅರ್ಥೈಸಿಕೊಂಡು ಪರಿಶೀಲಿಸಲು ಸಮಯ ಹಿಡಿಯುತ್ತದೆ ಎನ್ನಲಾಗಿದೆ.