ಭೋಪಾಲ್, ಮಾ 11 (DaijiworldNews/DB): ಅತ್ಯಾಚಾರ ಆರೋಪಿಯೊಬ್ಬನ ಮನೆಯನ್ನು ಮಹಿಳಾ ಪೊಲೀಸರ ಗುಂಪೊಂದು ಬುಲ್ಡೋಜರ್ನಿಂದ ಕೆಡವಿ ಹಾಕಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್ ಎಂಬ ಸ್ಥಳದಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಾಲ್ಕನೇ ಆರೋಪಿ ಕೌಶಲ್ ಕಿಶೋರ್ ಚೌಬೆ ಪರಾರಿಯಾಗಿದ್ದ. ಈತ ಅಕ್ರಮವಾಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ. ಹೀಗಾಗಿ ಈತನ ಮನೆಯನ್ನು ಮಹಿಳಾ ಪೊಲೀಸರು ಬುಲ್ಡೋಜರ್ ಮೂಲಕ ಕೆಡಿವಿ ಹಾಕಿದ್ದಾರೆ.
ಅತ್ಯಾಚಾರವು ಘೋರ ಅಪರಾಧವಾಗಿದ್ದು, ಮಹಿಳಾ ಪೊಲೀಸರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಅತ್ಯಾಚಾರ ಎಸಗುವ ಆರೋಪಿಗಳಿಗೆ ಶಿಕ್ಷೆ ನೀಡುವ ಈ ರೀತಿಯ ಕ್ರಮಗಳು ಅರ್ಹವಾಗಿವೆ ಎಂದು ರಾಣೆ ಪೊಲೀಸ್ ಠಾಣಾಧಿಕಾರಿ ಪ್ರಶಿತಾ ಕುರ್ಮಿ ಹೇಳಿದ್ದಾರೆ.