ತಿರುವನಂತಪುರ, ಮಾ 11 (DaijiworldNews/MS): ಕರ್ನಾಟಕದಂತೆ ಈಗ ಕೇರಳದಲ್ಲಿಯೂ ಬಿಸಿಗಾಳಿ ಹಾಗೂ ಗರಿಷ್ಠ ತಾಪಮಾನ ಏರಿಕೆಯು ಅಪಾಯದ ಮಟ್ಟ ಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಭಾರೀ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದ ಹಲವೆಡೆ ಈಗ ಗರಿಷ್ಠ ತಾಪಮಾನ 54 ಡಿಗ್ರಿ ಸೆಲ್ಸಿಯಸ್ ದಾಟಿದ್ದ, ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಹೇಳಿದೆ. ಡಿ-ಹೈಡ್ರೇಶನ್, ಅತಿಸಾರ, ಹೀಟ್ ಸ್ಟ್ರೋಕ್ ಮತ್ತು ಇತರ ಕಾಯಿಲೆಗಳನ್ನು ತಪ್ಪಿಸಲು ಕೇರಳದ ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಸೂಚಿಸಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಎಲ್ಲ ಹೊರಾಂಗಣ ಕೆಲಸಗಳಿಗೆ ನಿಷೇಧ ಹೇರಿದೆ. ರಾಜ್ಯದ ಹಲವೆಡೆ ಈಗ ಗರಿಷ್ಠ ತಾಪಮಾನದ ಪರಿಸ್ಥಿತಿಯಲ್ಲಿ ಬಿಸಿಲಿನ ವೇಳೆ ಜನರು ಅನಗತ್ಯ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಜತೆಗೆ ಯತೇಚ್ಛ ನೀರು ಕುಡಿಯುವುದಲ್ಲದೆ ಮಕ್ಕಳು-ಗರ್ಭಿಣಿಯರು ಸೂರ್ಯನ ಪ್ರಕಾಶಕ್ಕೆ ನೇರ ಮೈಯೊಡ್ಡಬಾರದು ಎಚ್ಚರಿಕೆ ನೀಡಿದೆ.