ನವದೆಹಲಿ, ಮಾ 12 (DaijiworldNews/DB): ಪರಕೀಯ ಮಹಿಳೆಗೆ ಜನಿಸಿದ ಮಗ ದೇಶಭಕ್ತನಾಗಲು ಎಂದಿಗೂ ಸಾಧ್ಯವಿಲ್ಲ ಎಂಬ ಚಾಣಕ್ಯನ ಮಾತುಗಳನ್ನು ರಾಹುಲ್ ಗಾಂಧಿ ನಿಜ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಟೀಕಿಸಿದ್ದಾರೆ.
ವಿದೇಶಿ ನೆಲದಲ್ಲಿ ಹೋಗಿ ಭಾರತದ ಬಗ್ಗೆ ಅವರು ನೀಡಿದ ಹೇಳಿಕೆ ಕ್ಷಮಾರ್ಹವಲ್ಲ. ಅವರನ್ನು ದೇಶದಿಂದ ಹೊರ ಹಾಕಬೇಕು. ಅವರ ತಾಯಿ ಇಟಲಿಯಿಂದ ಬಂದವರು. ಹೀಗಾಗಿ ಅವರು ಭಾರತದವರಲ್ಲ ಎಂದು ನಾವು ಭಾವಿಸಿದ್ದೇವೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಅಸ್ತಿತ್ವ ನಿಧಾನಕ್ಕೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಅವರ ಮನಸ್ಸೂ ಈಗ ಭ್ರಷ್ಟಗೊಳ್ಳುವೆಡೆಗೆ ಸಾಗುತ್ತಿದೆ. ಸಂಸತ್ತು ಸರಿಯಾಗಿ ನಡೆದರೆ ಕೆಲಸಗಳೂ ಹೆಚ್ಚು. ಕೆಲಸ ಹೆಚ್ಚಾದರೆ ಕಾಂಗ್ರೆಸ್ಗೆ ಉಳಿಗಾಲ ಇಲ್ಲದಂತಾಗುತ್ತದೆ. ಅದಕ್ಕಾಗಿಯೇ ಇಂತಹ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ ಎಂದು ಪ್ರಜ್ಞಾ ಸಿಂಗ್ ಆಪಾದಿಸಿದರು.
ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಮಾತನಾಡುವಾಗ ಮೈಕ್ಗಳನ್ನು ಆಫ್ ಮಾಡಲಾಗುತ್ತದೆ ಎಂದು ಲಂಡನ್ನಲ್ಲಿ ರಾಹುಲ್ ಹೇಳಿಕೆ ನೀಡಿದ್ದರು.