ನವದೆಹಲಿ, ಮಾ 12 (DijiworldNews/HR): ಬಾಲಿವುಟ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ದೀಕ್ಷಿತ್(91) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಶ್ರೀರಾಮ್ ನೆನೆ ಅವರು ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ಮುಂಬೈನ ವರ್ಲಿ ಪ್ರದೇಶದಲ್ಲ, ಸ್ನೇಹಲತಾ ದೀಕ್ಷಿತ್ ಅವರ ಅಂತಿಮ ವಿಧಿವಿಧಾನಗಳು ಮಧ್ಯಾಹ್ನ 3-4 ರ ನಡುವೆ ವೈಕುಂಠ ಧಾಮದಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.