ಪಂಜಾಬ್, ಮಾ 12 (DaijiworldNews/DB): ಬಂದೂಕು ಸಂಸ್ಕೃತಿ ವಿರುದ್ದ ಮಹತ್ವದ ನಿರ್ಧಾರ ಕೈಗೊಂಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರವು ರಾಜ್ಯಾದ್ಯಂತ 813 ಬಂದೂಕುಗಳ ಪರವಾನಗಿಗಳನ್ನು ರದ್ದುಗೊಳಿಸಿದೆ.
ಲೂಧಿಯಾನ ಗ್ರಾಮಾಂತರದಿಂದ 87, ಶಹೀದ್ ಭಗತ್ ಸಿಂಗ್ ನಗರದಿಂದ 48, ಗುರುದಾಸ್ಪುರದಿಂದ 10, ಫರೀದ್ಕೋಟ್ನಿಂದ 84, ಪಠಾಣ್ಕೋಟ್ನಿಂದ 199, ಹೋಶಿಯಾಪುರದಿಂದ 47, ಕಪುರ್ತಲಾದಿಂದ 6, ಎಸ್ಎಎಸ್ ಕಸ್ಬಾದಿಂದ 235 ಮತ್ತು ಸಂಗ್ರೂರ್ನಿಂದ 16, ಅಮೃತಸರ ಕಮಿಷನರೇಟ್ನ 27 ಮತ್ತು ಜಲಂಧರ್ ಕಮಿಷನರೇಟ್ನ 11 ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಇಂದು ಬಂದೂಕು ಪರವಾನಗಿಗಳನ್ನು ಸರ್ಕಾರ ರದ್ದು ಮಾಡಿ ಆದೇಶಿಸಿದೆ.
ಇನ್ನು ಈವರೆಗೆ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಶಸ್ತ್ರಾಸ್ತ್ರ ಪರವಾನಗಿ ರದ್ದತಿ ಮಾಡಲಾಗಿದೆ. ಬಂದೂಕು ಸಂಸ್ಕೃತಿಯನ್ನು ಕೊನೆಗಾಣಿಸುವ ಕಾರ್ಯಾಚರಣೆಯ ಭಾಗವಾಗಿ ಇದು ನಡೆದಿದೆ. ಬಂದೂಕು ಇಟ್ಟುಕೊಳ್ಳಲು ಅವಕಾಶವಿದ್ದರೂ, ಸಾರ್ವಜನಿಕ ಕಾರ್ಯಕ್ರಮಮ ಧಾರ್ಮಿಕ ಸ್ಥಳ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಅದನ್ನು ಕೊಂಡೊಯ್ಯುವುದು ಮತ್ತು ಪ್ರದರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಿಂಸಾಚಾರ, ಶಸ್ತ್ರಾಸ್ತ್ರಗಳ ವೈಭವೀಕರಣ ನಿಷೇಧ ನಮ್ಮ ಗುರಿ ಎಂದಿದೆ.