ನವದೆಹಲಿ, ಮಾ 14 (DaijiworldNews/HR): ಭಾರತದ ಮೊದಲ ಮಹಿಳಾ ಲೋಕೋಮೋಟಿವ್ ಪೈಲಟ್ ಸುರೇಖಾ ಯಾದವ್ ಅವರು ಸೊಲ್ಲಾಪುರದಿಂದ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ವರೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಚಲಾಯಿಸಿದ್ದು, ವಂದೇ ಭಾರತ್ ಎಕ್ಸ್ಪ್ರೆಸ್ನ ಮೊದಲ ಮಹಿಳಾ ಲೋಕೋಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಸುರೇಖಾ ಯಾದವ್ ವಂದೇ ಭಾರತ್ ಎಕ್ಸ್ಪ್ರೆಸ್ನ ಮೊದಲ ಮಹಿಳಾ ಲೋಕೋ ಪೈಲಟ್' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನ ವೇದಿಕೆ ಸಂಖ್ಯೆ ಎಂಟನ್ನು ಸುರೇಖಾ ಯಾದವ್ ಅವರನ್ನು ಗೌರವಿಸಲು ಬಳಸಲಾಗಿದ್ದು, ಹೈಸ್ಪೀಡ್ ವಂದೇ ಭಾರತ್ ರೈಲನ್ನು ಚಲಾಯಿಸಲು ನೀಡಿದ ಅವಕಾಶಕ್ಕಾಗಿ ಸುರೇಖಾ ಯಾದವ್ ಧನ್ಯವಾದ ಅರ್ಪಿಸಿದ್ದಾರೆ.