ಮುಂಬಯಿ, ಮಾ 14 (DaijiworldNews/DB): ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ಗಾಯಕ ಅದ್ನಾನ್ ಸಾಮಿ ಅವರು ಬಾವಿಯೊಳಗಿನ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂಬುದಾಗಿ ಜರೆದಿದ್ದಾರೆ.
ಎಸ್,ಎಸ್, ರಾಹಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದ ನಾಟೂ ನಾಟೂ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಆಂಧ್ರ ಸಿಎಂ ಚಿತ್ರತಂಡಕ್ಕೆ ಶುಭ ಕೋರಿದ್ದರು. ಇನ್ನು ಈ ಹಿಂದೆ ಅವರು ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ ಎಂದಿದ್ದ ಜಗನ್ ಮೋಹನ್ ರೆಡ್ಡಿ ಅವರ ಟ್ವೀಟ್ಗೆ ಸೋಮವಾರ ಕಿಡಿ ಕಾರಿರುವ ಗಾಯಕ ಅದ್ನಾನ್, ಜಗನ್ ಮೋಹನ್ ರೆಡ್ಡಿ ಅವರು ಬಾವಿಯೊಳಗಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ. ಅವರಿಗೆ ಸಮುದ್ರದ ಬಗ್ಗೆ ಯೋಚಿಸಲಾಗಲೀ, ರಾಷ್ಟ್ರೀಯ ಹೆಮ್ಮೆಯನ್ನು ಬೋಧಿಸಲು, ಅಳವಡಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ಪ್ರಾದೇಶಿಕ ವಿಭಜನೆಗಳನ್ನು ಸೃಷ್ಟಿಸಲು ಅವರು ಯತ್ನಿಸಿದ್ದಾರೆ. ಭಾರತೀಯ ಚಿತ್ರವೊಂದಕ್ಕೆ ಪ್ರಶಸ್ತಿ ಬಂದರೆ ಅದನ್ನು ನಾವು ರಾಷ್ಟ್ರೀಯ ಹೆಮ್ಮೆಯಾಗಿ ಸ್ವೀಕರಿಸಬೇಕೇ ಹೊರತು ಪ್ರಾದೇಶಿಕ ದೃಷ್ಟಿಯಲ್ಲಿ ನೋಡುವುದು ಸಲ್ಲ. ಆದರೆ ಪ್ರಾದೇಶಿಕವಾಗಿ ನೋಡಿದ ಜಗನ್ ಮೋಹನ್ ರೆಡ್ಡಿ ಅವರಿಗೆ ನಾಚಿಕೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.