ನವದೆಹಲಿ, ಮಾ 14 (DaijiworldNews/HR): ಭಾರತದಲ್ಲಿ ನಕ್ಸಲ್ ಹಿಂಸಾಚಾರ ಶೇ 77ರಷ್ಟು ಕಡಿಮೆಯಾಗಿದ್ದು, ಇದರಿಂದ ಸಾವಿನ ಪ್ರಮಾಣವೂ ಶೇ 90ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ನಕ್ಸಲ್ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದ್ದು, 2022 ರಲ್ಲಿ 45 ಜಿಲ್ಲೆಗಳ 176 ಪೊಲೀಸ್ ಠಾಣೆಗಳು ಮಾತ್ರ ಈ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿವೆ.
ಇನ್ನು 2010 ರಲ್ಲಿ 96 ಜಿಲ್ಲೆಗಳ ಕನಿಷ್ಠ 465 ಪೊಲೀಸ್ ಠಾಣೆಗಳು ನಕ್ಸಲ್ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿದ್ದವು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.