ಉತ್ತರಪ್ರದೇಶ, ಮಾ 16 (DaijiworldNews/HR): ಉತ್ತರಪ್ರದೇಶದಲ್ಲಿ ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗು ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ನಕಲಿ ವೈದ್ಯನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ತಿಲಕ್ ಸಿಂಗ್ ಎಂಬ ನಕಲಿ ವೈದ್ಯ ಮಗುವಿಗೆ ಸರ್ಜರಿ ನಡೆಸಿದ ನಂತರ ಭಾರೀ ಪ್ರಮಾಣದಲ್ಲಿ ರಕ್ತ ಹರಿದು ಹೋದ ಪರಿಣಾಮ ಮಗು ಮೃತಪಟ್ಟಿದೆ.
ಇನ್ನು ಎರಡೂವರೆ ವರ್ಷದ ಮಗುವಿನ ಪ್ರಕರಣ ಸಂಬಂಧ ತಿಲಕ್ ಸಿಂಗ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.