ಮಡಿಕೇರಿ, ಮಾ 20(SM): ಮಡಿಕೇರಿಯಿಂದ ಸಂಪಾಜೆ ಕಡೆಗೆ ಕಾರಲ್ಲಿ ಹೊರಟಿದ್ದ ಬಿಜೆಪಿ ಮುಖಂಡ ಸಂಚರಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಮುಖಂಡ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಳಗಿ ಬಾಲಚಂದ್ರ ಮೃತ ದುರ್ದೈವಿ.
ಸಂಪಾಜೆ ಗ್ರಾಪಂ ಮಾಜಿ ಸದಸ್ಯ ಪಯಸ್ವಿನಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಬಾಲಚಂದ್ರ ಚುನಾವಣೆ ನಿಮಿತ್ತ ಸಮಾಲೋಚನೆಗಾಗಿ ಮಡಿಕೇರಿಗೆ ತೆರಳಿದ್ದರು. ಸಂಜೆ ಅವರು ಮಡಿಕೇರಿಯಿಂದ ಕಾರಲ್ಲಿ ಹಿಂದಿರುಗುತ್ತಿರುವಾಗ ಮೇಕೇರಿ ಬಳಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಪರಿಣಾಮವಾಗಿ ಬಾಲಚಂದ್ರ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ತಕ್ಷಣ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಕೆಲವೇ ಕ್ಷಣಗಳಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸಂಪಾಜೆ ಪರಿಸರದ ಭರವಸೆಯ ನಾಯಕರಾಗಿದ್ದ ಕಳಗಿ ಬಾಲಚಂದ್ರ ಅವರ ಅಪಘಾತದ ಸುದ್ದಿ ತಿಳಿದು ಅವರ ಪಕ್ಷದ ಕಾರ್ಯಕರ್ತರು ಬಂಧುಗಳು ಮತ್ತು ಹಿತೈಷಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.