ನವದೆಹಲಿ, ಮಾ 17 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸಾಗುತ್ತಿರುವ ಹಾದಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಕ್ಸ್ಫರ್ಡ್ ಒಕ್ಕೂಟ ನೀಡಿದ್ದ ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
ದೇಶೀಯ ವಿಚಾರ ಹಾಗೂ ಸವಾಲುಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡುವುದು ಅಗೌರವದ ಕೆಲಸವಾಗುತ್ತದೆ. ಭಾರತದಲ್ಲಿನ ವಿಚಾರಗಳು, ಸವಾಲುಗಳನ್ನು ಭಾರತದಲ್ಲೇ ಚರ್ಚಿಸಲು ನಮಗೆ ನಮ್ಮ ದೇಶದಲ್ಲಿ ಅವಕಾಶವಿದೆ. ಹೀಗಾಗಿ ಈ ಆಹ್ವಾನವನ್ನು ತಿರಸ್ಕರಿಸುತ್ತಿದ್ದೇನೆ ಎಂದವರು ಒಕ್ಕೂಟದ ಆಹ್ವಾನಕ್ಕೆ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲಂಡನ್ನಲ್ಲಿ ಭಾರತದ ಪ್ರಜಾಪ್ರಭುತ್ವದ ಅಪಾಯದಲ್ಲಿದೆ ಎಂದು ಮಾತನಾಡಿ ಬಿಜೆಪಿ ಸಹಿತ ಹಲವರ ಟೀಕೆಗೆ ಗುರಿಯಾದ ಘಟನೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.