ಅಹಮದಾಬಾದ್, ಮಾ 17 (DaijiworldNews/HR): ಗಂಡನ ಜೊತೆ ಇರುವ ಗೆಳತಿಯನ್ನು ತನ್ನ ವಶಕ್ಕೆ ಕೊಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಿಯಕರನಿಗೆ ಗುಜರಾತ್ ಹೈಕೋರ್ಟ್ 25,000 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ತನ್ನ ಪ್ರಿಯತಮೆಯ ಇಚ್ಛೆಯ ವಿರುದ್ಧವಾಗಿ ಬೇರೊಬ್ಬ ವ್ಯಕ್ತಿಯ ಜೊತೆ ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದು, ಆಕೆಯನ್ನು ತನ್ನ ವಶಕ್ಕೆ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದ.
ಇನ್ನು ನನ್ನ ಪ್ರಿಯತಮೆ ಗಂಡನನ್ನು ತ್ಯಜಿಸಲು ಸಿದ್ಧಳಾಗಿದ್ದಾಳೆ. ಆಕೆ ಈಗ ಗಂಡನಿಂದ ದೂರ ಇದ್ದು, ತವರು ಮನೆಯಲ್ಲಿ ವಾಸಿಸಲು ಬಯಸಿದ್ದಾಳೆ. ಅಲ್ಲದೇ ಆಕೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವ್ಯಕ್ತಿ ಹೇಳಿದ್ದಾನೆ.
ಯುವತಿಯ ಮನೆಯವರು ಆಕೆಯನ್ನು ಮತ್ತೆ ಗಂಡನ ಬಳಿ ಕರೆತಂದು ಬಿಟ್ಟು ಹೋಗಿದ್ದರು. ಇದರಿಂದ ಅಸಮಾಧಾನಗೊಂಡ ಪ್ರಿಯಕರ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತನ್ನ ಪ್ರಿಯತಮೆಯನ್ನು ಆಕೆಯ ಇಚ್ಛೆಯ ವಿರುದ್ಧವಾಗಿ ಗಂಡನ ಮನೆಯಲ್ಲಿ ಇರಿಸಿರುವುದಾಗಿ ಆರೋಪಿಸಿದ್ದ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮಹಿಳೆಯ ಜೊತೆ ಅರ್ಜಿದಾರರು ವಿವಾಹವಾಗಿದ್ದಾರೆಯೇ. ಅಷ್ಟೇ ಅಲ್ಲ ಆಕೆ ಈವರೆಗೂ ತನ್ನ ಗಂಡನಿನಿಂದ ವಿಚ್ಛೇದನ ಕೇಳಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿ, ಅರ್ಜಿದಾರ ವ್ಯಕ್ತಿಗೆ 25,000 ರೂಪಾಯಿ ದಂಡ ವಿಧಿಸಿ ಅರ್ಜಿ ತಿರಸ್ಕರಿಸಿದ್ದಾರೆ.