ನವದೆಹಲಿ, ಮಾ 17(DaijiworldNews/MS): ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ , ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ತಮ್ಮ ಹೇಳಿಕೆಯಲ್ಲಿ ಬಂದ ಮಾಧ್ಯಮ ವರದಿಗಳನ್ನು ಗುರುವಾರ ತಳ್ಳಿಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಹೇಳಿರುವುದಾಗಿ ಮಾಧ್ಯಮಗಳ ವರದಿ ಮತ್ತು ಟ್ವೀಟ್ ವೈರಲ್ ಆದ ಬೆನ್ನಲ್ಲೇ ಆವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
"ನಾನು ನೊಬೆಲ್ ಸಮಿತಿಯ ಉಪ ನಾಯಕ. ಇದೊಂದು ನಕಲಿ ಸುದ್ದಿ ಮತ್ತು ಟ್ವೀಟ್ ಆಗಿದೆ. ನಾವು ಇದೆಲ್ಲವನ್ನು ಸುಳ್ಳು ಸುದ್ದಿ ಎಂದು ಪರಿಗಣಿಸಬೇಕು. ಇದು ನಕಲಿಯಾದ ಕಾರಣ ಚರ್ಚಿಸುವುದು ಬೇಡ. ಮತ್ತು ಈ ಸುದ್ದಿಗೆ ಶಕ್ತಿ ಅಥವಾ ಆಮ್ಲಜನಕವನ್ನು ನೀಡಬಾರದು. ನಾನು ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ಅಸ್ಲೆ ಟೋಜೆ ಹೇಳಿದ್ದಾರೆ.
ಅದರೂ, ಇದು ಯುದ್ಧದ ಯುಗವಲ್ಲಎಂದು ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದನ್ನು ಟೋಜೆ ಶ್ಲಾಘಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಪರಿಣಾಮಗಳನ್ನು ರಷ್ಯಾಕ್ಕೆ ನೆನಪಿಸಲು ಭಾರತದ ಹಸ್ತಕ್ಷೇಪವು ತುಂಬಾ ಸಹಾಯಕವಾಗಿದೆ. ಭಾರತವು ದೊಡ್ಡ ಧ್ವನಿಯಲ್ಲಿ ಮಾತನಾಡಲಿಲ್ಲ, ಯಾರಿಗೂ ಬೆದರಿಕೆ ಹಾಕಲಿಲ್ಲ, ಅವರು ತಮ್ಮ ನಿಲುವನ್ನು ಸೌಹಾರ್ದಯುತವಾಗಿ ಬಹಿರಂಗಪಡಿಸಿದ್ದು ಇಂತಹ ಮಾತುಗಳ ಅಗತ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.