ನವದೆಹಲಿ, ಮಾ 17 (DaijiworldNews/HR): ದೇಶಾದ್ಯಂತ ಎಲ್ಲಾ ಕಂಟೋನ್ಮೆಂಟ್ ಬೋರ್ಡ್ ಚುನಾವಣೆಗಳನ್ನು ಮುಂದೂಡಲಾಗಿದ್ದು, ಕೇಂದ್ರ ಸರ್ಕಾರ ಚುನಾವಣೆ ನಡೆಸುವ ಕುರಿತು ಹಿಂದಿನ ಅಧಿಸೂಚನೆಯನ್ನ ರದ್ದುಗೊಳಿಸಿದೆ.
ರಕ್ಷಣಾ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ದೇಶಾದ್ಯಂತ 57 ಕಂಟೋನ್ಮೆಂಟ್ ಬೋರ್ಡ್ಗಳಿಗೆ ಏಪ್ರಿಲ್ 30ರಂದು ಚುನಾವಣೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಚುನಾವಣೆಯನ್ನ ಮುಂದೂಡಲಾಗಿದೆ.
ಈ ಹಿಂದೆ ಏಪ್ರಿಲ್ 30ರಂದು ಚುನಾವಣೆ ನಡೆಸಲು ಅಧಿಸೂಚನೆ ಬಂದಿತ್ತು. ಆದ್ರೆ ಇತ್ತೀಚೆಗೆ ಕೇಂದ್ರವು ಚುನಾವಣೆಯನ್ನ ಮುಂದೂಡುವ ಚುನಾವಣಾ ಅಧಿಸೂಚನೆಯನ್ನ ರದ್ದುಗೊಳಿಸಿದೆ. ಈ ವರ್ಷ ಉಚಿತ ಚಿಹ್ನೆಗಳ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಮತ್ತು ವಾರ್ಡ್ಗಳ ಮೀಸಲಾತಿ ಮೊದಲಿನಂತೆಯೇ ಇರುತ್ತದೆ ಎಂದು ಕಂಟೋನ್ಮೆಂಟ್ ಬೋರ್ಡ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.