ನವದೆಹಲಿ, ಮಾ 19 (DaijiworldNews/HR): ಭಾರತದ ಸಮಗ್ರತೆಗೆ ಧಕ್ಕೆ ತರುವ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಶನಿವಾರ ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿದ ಠಾಕೂರ್, ಭಾರತದ ಸಮಗ್ರತೆಗೆ ಧಕ್ಕೆ ತರುವಂತಹ ಧ್ವನಿಗಳು ಮತ್ತು ನಿರೂಪಣೆಗಳಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ಪೂರ್ವಕವಲ್ಲದೆಯೂ ಅವಕಾಶ ನೀಡುವುದನ್ನು ತಡೆಯಲು ಮತ್ತು ಮಾಧ್ಯಮ ಭ್ರಾತೃತ್ವವನ್ನು ಜಾಗರೂಕರಾಗಿರಲು ನಾನು ಒತ್ತಾಯಿಸುತ್ತೇನೆ ಎಂದರು.
ಇನ್ನು ಭಾರತದ ಅಖಂಡತೆಗೆ ಧಕ್ಕೆ ತರುವಂತಹ ಗೊತ್ತಿದ್ದೋ ಅಥವಾ ತಿಳಿಯದೆಯೋ ಇಂತಹ ಧ್ವನಿಗಳು ಮತ್ತು ನಿರೂಪಣೆಗಳಿಗೆ ಜಾಗ ನೀಡದಂತೆ ಮಾಧ್ಯಮ ಬಂಧುಗಳು ಜಾಗೃತರಾಗಬೇಕು ಎಂದು ಎಚ್ಚರಿಸಿದ್ದಾರೆ.